ಗುರುವಾರ, ಸೆಪ್ಟೆಂಬರ್ 15, 2011

ನ್ಯಾನೋ ಕಥಾಗುಚ್ಛ - ಗರಿ ೫ - ನೀರು

ಒಬ್ಬ ಪುಣ್ಯಾತ್ಮ ಮಾಡ್ತಾ ಇದ್ದ ಹೋರಾಟಕ್ಕೆ ಕೈ ಜೋಡುಸ್ತ ಇದ್ದ ಜನಕ್ಕೆ ರಸ್ತೆ ಬದಿ ಸೋರ್ತ ಇದ್ದ ನಲ್ಲಿ ಕಾಣುಸಲೇ ಇಲ್ಲ.

ನ್ಯಾನೋ ಕಥಾಗುಚ್ಛ - ಗರಿ ೫ - ಅನ್ಸಿರ್ಲಿಲ್ಲ

  ಬಹಳ ಹೊತ್ತಿಂದ ಕಲ್ಲುಹಾಸಿನ ಮೇಲೆ ಒಬ್ಬ ಕುರುಡ ರಸ್ತೆ ದಾಟೋದುಕ್ಕೆ ಕಾಯ್ತಾ ಇದ್ದಿದ್ದುನ್ನ ನೋಡ್ತಾ ಕೂತಿದ್ದವನ್ಗೆ ಆ ೯ ವರ್ಷದ ಹುಡ್ಗ ಕುರುಡನ್ನ ರಸ್ತೆ ದಾಟಿಸೋವರ್ಗು ತಾನೇ ಆ ಕೆಲಸ ಮಾಡಬೇಕಿತ್ತು ಅನ್ಸಿರ್ಲಿಲ್ಲ...

ಮಂಗಳವಾರ, ನವೆಂಬರ್ 30, 2010

ನ್ಯಾನೋ ಕಥಾಗುಚ್ಛ - ಗರಿ ೪ - ಕಳ್ಳ

ಬೇರೆಯವರನ್ನೆಲ್ಲ ಕಳ್ಳರು ಕದೀಮರು ಅಂತ ಬೈತಾಸಾಗ್ತಿದ್ದವನಿಗೆ ತನ್ನ ಪಕ್ಕದಲ್ಲೇ ಹಾದು ಹೋದವಳನ್ನ ನೋಡಿ ಕುಡಿಮೀಸೆಯಲ್ಲೇ ನಗೆ ಅರಳಿದಾಗ ತಾನು ಕಳ್ಳಅನ್ನೋ ನಿಜ ಹುಸಿನಗೆಯಾಯ್ತು

ನ್ಯಾನೋ ಕಥಾಗುಚ್ಛ - ಗರಿ ೩ - ಹೂ

ತನ್ನ ನಲ್ಲೆ ಕೆನ್ನೆ ರಂಗಿಗೆ ಸರಿ ಹೊಂದುತ್ತೆ ಅಂತ ಗುಲಾಬಿ ಹೂವನ್ನ ಕೊಳ್ಳಲು ಹೋದವನಿಗೆ ಪಕ್ಕದಲ್ಲಿದ್ದ ಮಲ್ಲಿಗೆ ಅವರಮ್ಮನ್ನ ಜ್ಞಾಪಿಸಿತು.

ಬುಧವಾರ, ನವೆಂಬರ್ 24, 2010

ನ್ಯಾನೋ ಕಥಾ ಗುಚ್ಛ - ಗರಿ ೧ --> ಹಳ್ಳ

 ಜೀವಮಾನ ಪೂರ ನಿನ್ನ ಹೂವಿನ ಹಾಸಿನ ಮೇಲೇನೆ ನಡುಸ್ತೀನಿ ಅಂತ ಹೇಳಿದ ಅವನ್ಗೆ ಆ ಚಿಗರೆ ಕಂಗಳು ನೋಡಿ ಹುಷಾರಾಗಿ ದಾಟಿದ ಹಳ್ಳ ಕಾಣದೆ ಎಡವಿ ಬಿದ್ದ.